ನನಸಾದ ಮಿತ್ರರ ಕನಸು
ಬಾಲು,ನಗರದ ಹೆಸರಾಂತ ಉದ್ಯಮಿ ಶೇಖರಪ್ಪ ನವರ ಏಕ ಮಾತ್ರ ಪುತ್ರ.ಅವರಿದ್ದ ನಗರದಿಂದ ಕೇವಲ ಹತ್ತು ಕಿ.ಮಿ.ದೂರದ ಶಿವಪುರ ಶೇಖರಪ್ಪ ನವರ ಸ್ವ ಗ್ರಾಮ.ಅಲ್ಲಿ ಅವರದೇ ಆದ ಹತ್ತಾರು ಎಕರೆ ಹೊಲ-ಗದ್ದೆ,ತೊಟಗಳಿವೆ.ಅವುಗಳ ಉಸ್ತುವಾರಿ ಮಾಡುವುದು ಶೇಖರಪ್ಪ ನವರ ನಂಬಿಗಸ್ಥ ರೈತ ಶಿವಣ್ಣನದಾಗಿತ್ತು.
ಶಿವಣ್ಣ ನ ಮಗ,ಕೇಶವ.ನಿತ್ಯವೂ ಕೇಶವ ಹತ್ತಿರದಲ್ಲಿದ್ದ ನಗರದ ಶಾಲೆಗೆ ಸೈಕಲ್ ತುಳಿದುಕೊಂಡೇ ಹೋಗುತ್ತಿದ್ದ.ಬಾಲು ಕೂಡ ಅದೇ ಶಾಲೆಯಲ್ಲಿ ಓದುತ್ತಿದ್ದ.ಇಬ್ಬರದೂ ಒಂದೇ ತರಗತಿ, ಒಂದೇ ಊರು ಆಗಿದ್ದರಿಂದ ಅವರಲ್ಲಿ ಗಾಢವಾದ ಗೆಳೆತನ,ಆತ್ಮಿಯತೆ ಸಹಜವಾಗಿ ಬೆಳೆದಿತ್ತು.
ಬಿರು ಬೇಸಿಲಿನ ನಡುವೆ ನಿತ್ಯ,ಕೇಶವ ಶಾಲೆಗೆ ಹೋಗುವಾಗಲೆಲ್ಲ ತನ್ನ ಮನದಲ್ಲಿ ಈ ರಸ್ತೆಯ ಎರಡೂ ಬದಿಗಳಲ್ಲಿ ತಂಪಾದ ನೆರಳು ನೀಡುವ ಮರಗಳಿದ್ದರೆ ಎಷ್ಟು ಚೆನ್ನ-ಎಂದು ಅಂದುಕೊಳ್ಳುತ್ತಿದ್ದ.ಅದರಂತೆ ಪ್ರತಿ ವರ್ಷ ಕಾರಹುಣ್ಣಿಮೆ ಸಮಯ ಶಿವಪುರ ದಲ್ಲಿ ನಡೆಯುವ ಜಾತ್ರೆಗೆ ಬಾಲು ಬರುತ್ತಿದ್ದ.ಆಗ, ಅಲ್ಲಿನ ಬಿಸಿಲಿನ ವಾತಾವರಣ ಕಂಡು,ಅನುಭವಿಸಿ “ಛೇ.ಈ ಊರಲ್ಲೋಂದು ಪುಟ್ಟ ಅರಣ್ಯ ಇದ್ದಿದ್ದರೆ ಎಷ್ಟು ಚಂದಾಗಿರುತ್ತಿತ್ತು”ಎಂದು ಅಂದುಕೊಳ್ಳುತ್ತಿದ್ದ.ಬಿಡುವಿನ ವೇಳೆ ಈ ಇಬ್ಬರೂ ಗೆಳೆಯರು ತಮ್ಮ ಮನದ ಅನಿಸಿಕೆಗಳನ್ನು. ಪರಸ್ಪರ ಹಂಚಿಕೊಳ್ಳುತ್ತಿದ್ದರು.
ಕಾಲ ಚಕ್ರ ಉರುಳಿತು.ಬಾಲು, ಇಂಜಿನಿಯರಿಂಗ್ ಪದವಿ ಪಡೆದು ತನ್ನ ತಂದೆಯ ಉದ್ಯಮದಲ್ಲಿ ಕೈ ಜೋಡಿಸಿದ. ಇತ್ತ,ಕೇಶವ ಕೃಷಿ ವಿಜ್ಞಾನದ ಪದವಿ ಪಡೆದು ಸ್ವ ಗ್ರಾಮದಲ್ಲಿ ನೆಲೆಸಿ, ಆಧುನಿಕ ಬಳಸಿ, ಕೃಷಿಯಿಂದ ಹೆಚ್ಚು ಆದಾಯ ಬರುವಂತೆ ನೋಡತೊಡಗಿದ.
ಹೀಗೆ ಒಂದು ದಿನ, ಬಾಲು ಮನೆಗೆ ಬಂದಿದ್ದ ಕೇಶವ-ಶಿವಪುರದಿಂದ ನಗರಕ್ಕೆ ಸೇರುವ ರಸ್ತೆ ಇಕ್ಕೆಲಗಳಲ್ಲಿ, ಹಾದಿ ಹೋಕರಿಗೆ,ದನ-ಕರುಗಳಿಗೆ, ನೆರಳು ನೀಡುವ ಮೂರು ಬೆಳೆಸುವ ತನ್ನ ಮನದ ಇಂಗಿತ ಹೇಳಿದ.ಅದಕ್ಕೆ ಬಾಲು”ತುಂಬಾ ಒಳ್ಳೆಯ ಯೋಚನೆ ಅದನ್ನು ಕಾರ್ಯರೂಪಕ್ಕೆ ತರಲು ನಾನೂ ನಿನಗೆ ಸಹಾಯ ಮಾಡುವೆ”ಎಂದು ಹುರಿದುಂಬಿಸಿದ.ಮಾತು ಮುಂದುವರೆದಾಗ, ಬಾಲು,”ನನಗೂ ಅಷ್ಟೇ,ಕೇಶವಾ ಶಿವಪಪುರದ ದಕ್ಷಿಣ ಭಾಗದಲ್ಲಿ ಪಾಳು ಬಿದ್ದ ಹತ್ತಾರು ಎಕರೆ ಪ್ರದೇಶದಲ್ಲಿ ಪುಟ್ಟ ಅರಣ್ಯ ನಿರ್ಮಿಸುವ ಯೋಚನೆ ಇದೆ”ಎಂದಾಗ ಕೇಶವ”ವಾವ್… ಸೂಪರ್ ಐಡಿಯಾ, ಅರಣ್ಯ ನಿರ್ಮಿಸುವುದರಿಂದ ಜನ-ಜಾನುವಾರು ಮತ್ತು ಹಕ್ಕಿಗಳಿಗೆ ತುಂಬಾ ಸಹಾಯವಾಗುತ್ತದೆ.ಮಣ್ಣಿನ ಸವಕಳಿ ತಡೆದಂತಾಗುತ್ತದೆ,ಅದಕ್ಕೂ ಮಿಗಿಲಾಗಿ ದೇಶಕ್ಕೆ ಒಳ್ಳೆಯ ಸಂಪತ್ತು ನೀಡಿದಂತಾಗುತ್ತದೆ., ನಿನ್ನ ಈ ಕಾರ್ಯಕ್ಕೆ ನಾವೆಲ್ಲ ಸಹಕಾರ ನೀಡುತ್ತೇವೆ”ಎಂದು ಭರವಸೆ ನೀಡಿದ.
ಮುಂದಿನ ಹತ್ತು ವರ್ಷಗಳ ಅವಧಿಯೊಳಗೆ,ಕೇಶವ ತಾನು ಅಂದುಕೊಂಡ ರೀತಿ ಶಿವಪುರ ಗ್ರಾಮದಿಂದ ನಗರಕ್ಕೆ ಬಂದು ಸೇರುವ ದಾರಿಯ ಇಕ್ಕೆಲಗಳಲ್ಲೂ ಹಸಿರಿನಿಂದ ಕಂಗೊಳಿಸುವ ಸಾಲು-ಸಾಲು ಮರಗಳನ್ನು ಬೆಳೆಸಿ ದಾರಿ ಹೋಕರಿಗೆ ತಂಪಾದ ನೆರಳು ಸಿಗುವಂತೆ ಮಾಡಿದ.ಇತ್ತ ಬಾಲು ಕೂಡ, ತನ್ನ ಮನದ ಇಚ್ಛೆಯಂತೆ ಶಿವವಪುರ ಗ್ರಾಮದ ದಕ್ಷಿಣ ದಿಕ್ಕಿನಲ್ಲಿ ಪಾಳುಬಿದ್ದ ಜಮೀನಿನಲ್ಲಿ ಹಸಿರಿನಿಂದ ತುಂಬಿದ ಅರಣ್ಯ ನಿರ್ಮಿಸಿ,ತರಹೆವಾರಿ ಪ್ರಾಣಿ ಪಕ್ಷಿಗಳು ಬಂದು ನೆಲೆಸುವಂತೆ ಮಾಡಿದ.
ಶಿವಪುರ ಗ್ರಾಮದ ಈ ಇಬ್ಬರೂ ಯುವ ಮಿತ್ರರು, ತಾವು ಕಂಡ ಕನಸನ್ನು ನನಸಾಗಿಸಿ ಇತರರಿಗೂ ಮಾದರಿ ಯಾದರು.