Reading Time: < 1 minute
ಗುರುಪೂರ್ಣಿಮೆಯಂದು
ಮೊದಲಗುರು ತಾಯಿಗೆ, ಜೇವನ ಪಾಠ ಕಲಿಸಿದ ತಂದೆಗೆ,
ಒಂದಕ್ಷರ ಕಲಿಸಿದ ಎಲ್ಲಾ ಗುರು ಹಿರಿಯರಿಗೆ ಅರ್ಪಿತ ನನ್ನ ಈ ಪುಟ್ಟ ಕವನ.
ಗುರುನಮನ
ಗುರುವೇ ಗುರುವೇ
ಗುರುಪೂರ್ಣಿಮೆಯಂದು
ವ್ಯಾಸಪೂರ್ಣಿಮೆಯಂದು
ಶಿರಬಾಗಿ ನಮಿಸುವೆ.
ವಿದ್ಯಾ ಬುದ್ಧಿ ಕಲಿಸಿದ
ಬಾಳಿಗೆ ಮಾರ್ಗ ದರ್ಶಕರಾದ
ಜ್ಞಾನದೇಗುಲದ ಕಲಶ ಪ್ರಾಯರಾದ
ಗುರುವೇ ಭಾವಪೂರ್ಣ ವಂದನೆ.
ಶಾಂತಿ ಸಹನೆ ಬೀಜ ಬಿತ್ತಿದ
ಕರುಣೆ ಪ್ರೀತಿ ಮಮತೆ ಕಲಿಸಿದ
ಸದಾಚಾರ ನೀತಿ ಮೌಲ್ಯಗಳ ಬೋಧಿಸಿದ
ಗುರುವೇ ಸಾಷ್ಟಾಂಗ ವಂದನೆ.
ಕಗ್ಗಲ್ಲ ಶಿಲ್ಪವಾಗಿಸಿದ
ಅರಿವ ಮೂಡಿಸಿ ಗುರಿ ಮುಟ್ಟಿಸಿದ
ವೃತ್ತಿ ಯಶೋಗಾಥೆಯ ಹರಿಕಾರರಾದ
ಗುರುವೇ ಕೈಜೋಡಿಸಿ ನಮಿಸುವೆ.
Author: Kalpana Hosapete – kalpanahosapete1963 (at) gmail.com