ಪರೀಕ್ಷೆ
ರಂಗಪ್ಪ ಪಟ್ಟಣದ ಮಧ್ಯ ಭಾಗದಲ್ಲಿ ಒಂದು ಬೊಂಬೆ ಅಂಗಡಿ ಇಟ್ಟಿದ್ದ.ಅದರೊಳಗೆ ಎಲ್ಲರ ಮನೆ ಸೂರೆಗೊಳ್ಳುವಂತಹ ಆಕರ್ಷಕ ಬೊಂಬೆಗಳನ್ನು ಇಟ್ಟಿದ್ದ.ಹಬ್ಬ ಹರಿ ದಿನ, ಜಾತ್ರೆ,ಶಾಲಾ ರಾಜು ದಿನಗಳಲ್ಲಿ ಆತನಿಗೆ ಭರ್ಜರಿ ವ್ಯಾಪಾರ ಆಗುತ್ತಿತ್ತು.ರಂಗಪ್ಪನಿಗೆ ಮಕ್ಕಳಿರಲಿಲ್ಲ.
ದಿನಗಳು ಉರುಳಿದಂತೆ ಆತನಿಗೆ ವಯಸ್ಸಾಗುತ್ತ ಬಂದಿತು.ಆಗ ಆತ ತನ್ನ ಸಹಾಯಕ್ಕೆ ಒಬ್ಬ ನಂಬಿಗಸ್ಥ ಕೆಲಸಗಾರರನ್ನು ನೇಮಿಸಿ ಕೊಳ್ಳಲು ಯೋಚಿಸಿದ.ಈ ಸಂದರ್ಭದಲ್ಲಿ ಸುಮಾರು ಹದಿನಾರು ವಯಸ್ಸಿನ ಬಡ ಹುಡುಗನೊಬ್ಬ ಅವನಲ್ಲಿ ಕೆಲಸ ಕೇಳಿಕೊಂಡು ಬಂದ. !ಬಡವನಾದರೂ ಆ ಹುಡುಗನ ಮುಖದಲ್ಲಿ ಒಳ್ಳೆಯ ಕಳೆ ಇತ್ತು.,
ಜೊತೆಗೆ ಸಧೃಡ ಶರೀರವೂ ಇತ್ತು.ರಂಗಪ್ಪನ ಬಳಿ ಬಂದ ಆ ಹುಡುಗ, ತನ್ನ ಹೆಸರು”ಹರಿ” ಎಂತಲೂ, ತನಗೆ ತಂದೆ ಇಲ್ಲ, ತಾಯಿಯೊಂದಿಗೆ ವಾಸಿಸುತ್ತಿರುವುದಾಗಿ ಹೇಳಿದ. ಹರಿ ಯನೇರಮಾತು,ಆತನ ಸ್ಥಿತಿ ಅರಿತ ರಂಗಪ್ಪ ನಾಳೆಯಿಂದಲೇ ಕೆಲಸಕ್ಕೆ ಬರುವಂತೆ ಸೂಚಿಸಿದ.ಅದರ ಬೆನ್ನಲ್ಲೇ ಈ ಅಪರಿಚಿತ ಹುಡುಗನ ಗುಣ, ಚತುರತೆ ಯ ಪರೀಕ್ಷೆ ಮಾಡಬೇಕೆಂದು ರಂಗಪ್ಪ ನಿರ್ಧರಿಸಿದ.ಮಾರನೇಯ ದಿನ ಹರಿ,ರಂಪ್ಪನ ಅಂಗಡಿಗೆ ಬಂದಾಗ ಒಂದಿಷ್ಟು ಬೊಂಬೆಗಳನ್ನು ಒಂದು ರಟ್ಟಿನ ಡಬ್ಬದಲ್ಲಿ ಹಾಕಿ,
ಇವುಗಳನ್ನು ಪಟ್ಟಣದ ಶಿವನ ದೇವಾಲಯದ ಬಳಿ ಹೋಗಿ ಮಾರಿ ತರುವಂತೆ ತಿಳಿಸಿದ.ಆ ಡಬ್ಬದಲ್ಲಿ ಉದ್ದೇಶಪೂರ್ವಕವಾಗಿ ಒಂದು ಬೆಳ್ಳಿ ಬೊಂಬೆಯನ್ನು ರಂಗಪ್ಪ ಇಟ್ಟಿದ್ದ.ಹರಿ ತನ್ನ ಯಜಮಾನ ತಿಳಿಸಿದಂತೆ ಆ ದೇವಾಲಯದ ಬಳಿ ಹೋಗಿ ಬೊಂಬೆ ಮಾರಲು ಮುಂದಾದಾಗ,ಆತನ ಕಣ್ಣಿಗೆ ಡಬ್ಬದೊಳಗಿದ್ದ ಬೆಳ್ಳಿ ಬೊಂಬೆ ಗೋಚರಿಸಿತು.ಅದನ್ನು ತನ್ನ ಜೇಬಿನಲ್ಲಟ್ಟುಕೊಂಡು,ಉಳಿದ ಬೊಂಬೆಗಳನ್ನು ಕೆಲವೇ ಘಂಗಟೆಗಳಲ್ಲಿ ಮಾರಾಟ ಮಾಡಿದ.ನಂತರ ಆ ಹಣದೊಂದಿಗೆ ಯಜಮಾನನ ಬಳಿ ಬಂದ ಹರಿ, ತನ್ನ ಜೇಬಿನಿಂದ ಬೆಳ್ಳಿ ಬೊಂಬೆ ತೆಗೆದು ಕೊಡುತ್ತ”ಯಜಮಾನರೇ.ಇದು ಈ ಡಬ್ಬದಲ್ಲಿತ್ತು. “ಎಂದು ಹೇಳಿ ಮಾರಾಟದ ಹಣ ಸಂದಾಯ ಮಾಡಿದ..
ಅದನ್ನು ಪಡೆದ ರಂಗಪ್ಪ ಮನದಲ್ಲಿ “ಗುಡ್ ಮೊದಲನೇ ಪರೀಕ್ಷೆ ಯಲ್ಲಿ ಹುಡುಗ ಪಾಸ್ ಆದ”ಎಂದು ಅಂದುಕೊಂಡ.ಒಂದು ವಾರ ಕಳೆದ ನಂತರ, ರಂಗಪ್ಪ ಈ ಬಾರಿ ಹರಿಯ ಕೈ ಗೆ ಒಂದು ಪ್ಯಾಕೆಟ್ ಕೊಡುತ್ತ ಇದರಲ್ಲಿ ಐದು ಸಾವಿರ ರೂಪಾಯಿ ಗಳಿವೆ ಇದನ್ನು ಪಟ್ಟಣದ ಹೊರವಲಯದಲ್ಲಿರುವ ತನ್ನ ಮಿತ್ರ ನಿಗೆ ತಲುಪಿಸಿ ಬರುವಂತೆ ಅವನ ವಿಳಾಸ ನೀಡಿ ತಿಳಿಸಿದ. ಆಗಲೂ ಸಹ ಆ ಹುಡುಗನಿಗೆ ಗೊತ್ತಿಲ್ಲದಂತೆ ರಂಗಪ್ಪ ಬೇಕೆಂದೇ ಒಂದು ಸಾವಿರ ರೂಪಾಯಿ ಹೆಚ್ಚಿಗೆ ಇಟ್ಟಿದ್ದ.ಮಾಲೀಕನಿಂದ ಹಣದ ಪ್ಯಾಕೆಟ್ ಪಡೆದ ಹರಿ, ಸೈಕಲ್ ಏರಿ ರಂಗಪ್ಪ ನ ಮಿತ್ರನನ್ನು ಕಂಡು ಆ ಪ್ಯಾಕೆಟ್ ನಿಂದ ಹಣ ತೆಗೆದು ಎಣಿಸಿಕೊಡುವಾಗ ಅದರಲ್ಲಿ ಆರು ಸಾವಿರ ರೂಪಾಯಿ ಇರುವುದನ್ನು ಗಮನಿಸಿ,ಆ ಪೈಕಿ ಒಂದು ಸಾವಿರ ರೂಪಾಯಿ ತೆಗೆದು ತನ್ನ ಜೇಬಿನ್ನಲ್ಲಿ ಇಟ್ಟಕೊಂಡ.ಆನಂತರ ಅಂಗಡಿಗೆ ಬಂದ ಹರಿ “ಯಜಮಾನರೇ..
ತಾವು ಮರೆತು ಅದರಲ್ಲಿ ಒಂದು ಸಾವಿರ ಹೆಚ್ಚಿಗೆ ಇಟ್ಟಿದ್ದಂತೆ ಕಾಣತ್ತೆ”ಎಂದು ತನ್ನ ಜೇಬಿನಿಂದ ಆ ಒಂದು ಸಾವಿರ ರೂಪಾಯಿ ತೆಗೆದು ಯಜಮಾನನಿಗೆ ವಾಪಸ್ ಮಾಡಿದ..ಅವನಿಂದ ಹಣ ಪಡೆದ ರಂಗಪ್ಪ ಈ ಹುಡುಗ ತನ್ನ ಎರಡನೇಯ ಪರೀಕ್ಷೆ ಯಲ್ಲೂ ಉತ್ತೀರ್ಣ ನಾದ ಎಂದು ಸಂತೋಷಪಟ್ಟ.ಇನ್ನು ಆ ಹುಡುಗನನ್ನು ಮೂರನೇಯ ಹಾಗೂ ಅಂತಿಮ ಪರೀಕ್ಷೆ ಒಳಪಡಿಸಬೇಕೆಂದು ನಿರ್ಧರಿಸಿದ ರಂಗಪ್ಪ, ಮೂರು ವಾರಗಳ ಬಳಿಕ ಹರಿಯನ್ನು ದ್ದೇಶಿಸಿ ತಾನು ಪತ್ನಿ ಸಮೇತ ನಾಗಿ ಐದುದಿನ ತೀರ್ಥ ಕ್ಷೇತ್ರ ಕ್ಕೆ ಹೋಗುತ್ತಿದ್ದೇನೆ ಆ ಒಂದು ಅವಧಿಯಲ್ಲಿ ಸರಿಯಾದ ಟೈಂ ಗೆ ಬಂದು ವ್ಯಾಪಾರ ಮಾಡು ಎಂದು ಹೇಳಿದ.ಹೀಗೆ ಹೇಳಿ ಹೊರಡುವ ಮುನ್ನಾದಿನ ಹರಿಗೆ ತಿಳಿಯದ ರೀತಿ, ತಾನು ಕುಳಿತುಕೊಳ್ಳುವ ಸ್ಥಳದ ಹಿಂದಿದ್ದ ಗೋಡೆ ಮೇಲೆ ಇರಿಸಿದ ದೇವರ ಫೋಟೋ ಹಿಂಭಾಗ ಒಂದಿಷ್ಟು ಹಣದ ಕಂತೆ, ಹಾಗೂ ಕ್ಯಾಷ್ ಡ್ರಾಯರ್ ಒಳಬದಿ ಒಂದು ಹಣದ ಥೈಲಿ ಇಟ್ಟು ಪ್ರಯಾಣ ಬೆಳೆಸಿದ್ದ. ಮರುದಿನ ಎಂದಿನಂತೆ ಆ ಟೈಂ ಗೆ ಸರಿಯಾಗಿ ಬಂದ ಹರಿ,
ಅಂಗಡಿ ಬಾಗಿಲು ತೆರೆದು ಕಸಗಿಸ ಹೊಡೆದು ತನ್ನಲ್ಲಿದ್ದ ಚತುರತೆ, ಪ್ರಾಮಾಣಿಕತೆ ಉಪಯೋಗಿಸಿ ಭಾರೀ ಭರ್ಜರಿ ವ್ಯಾಪಾರ ಮಾಡಿದ್ದ.ತೀರ್ಥ ಯಾತ್ರೆ ಪೂರೈಸಿ ಮರಳಿದ ರಂಗಪ್ಪ ಅವರಿವರಿಂದ ಹರಿ, ಚೆನ್ನಾಗಿ ವ್ಯಾಪಾರ ಮಾಡಿದ ವಿಷಯ ತಿಳಿದು ಕೊಂಡ.ಮರುದಿನ ಅಂಗಡಿಗೆ ಬಂದ ರಂಗಪ್ಪ ತಾನು ಹರಿ ಗೆ ಗೊತ್ತಿಲ್ಲದಂತೆ ಇಟ್ಟಿದ್ದ ಹಣ ಪರಿಶೀಲಿಸಿದ..ಅದು ಹೇಗಿತ್ತೋ ಹಾಗೆಯೇ ಇತ್ತು.ಆಗ ರಂಗಪ್ಪ ಈ ಹುಡುಗ ಎಲ್ಲ ಪರೀಕ್ಷೆ ಯಲ್ಲೂ ಉತ್ತೀರ್ಣ ನಾಗಿದ್ದಾನೆ, ಹೀಗಾಗಿ ಆತನನ್ನು ಖಾಯಂ ಆಗಿ ನೇಮಿಸಿಕೊಳ್ಳಬೇಕೆಂದು ಉದ್ದೇಶಿಸಿದ.ಆ ಸಂಜೆ ಹರಿ ಮನೆಗೆ ಹೊರಡುವ ಮುನ್ನ”ನಾಳೆ ನೀನು ಬರುವಾಗ ನಿನ್ನ ತಾಯಿಯನ್ನು ಕರೆದುಕೊಂಡು ಬಾ..
“ಎಂದು ಹೇಳಿದ.ಅದನ್ನು ಆಲಿಸಿದ ಹರಿಯ ಮನದಲ್ಲಿ”ತಾನೇನಾದರೂ ತಪ್ಪು ಮಾಡಿದೆನಾ? ಮತ್ಯಾಕೆ ನನ್ನ ಯಜಮಾನರು ತಾಯಿಯನ್ನು ಕರೆದು ತರುವಂತೆ ಹೇಳಿದರು? “ಎಂಬ ಆಲೋಚನೆ ಶುರುವಿಟ್ಟುಕೊಂಡಿತು.ಆ ಸಂಜೆ ಮನೆಗೆ ಬಂದ ಹರಿ, ಯಜಮಾನ ಹೇಳಿದ ವಿಷಯ ತಾಯಿಗೆ ತಿಳಿಸಿ,ಮಾರನೇಯ ದಿನ ಅವರೊಂದಿಗೆ ಅಂಗಡಿಗೆ ಬಂದ. ಹರಿಯ ತಾಯಿಯನ್ನು ಕಂಡ ರಂಗಪ್ಪ ಅವರನ್ನು ಆದರದಿಂದ ಬರಮಾಡಿಕೊಂಡು ಕುಳಿತುಕೊಳ್ಳಲು ಕುರ್ಚಿ ನೀಡಿ ತಾಯಿ…ಈ ಹರಿ ನಿಮ್ಮ ಮಗನಾ..?”ಎಂದು ಪ್ರಶ್ನಿಸಿದ. ಹಾಂ..
ಹೌದು,ಯಾಕೆ, ಏನಾದರೂ ತಪ್ಪು ಎಸಗಿದ್ದಾನಾ..?”ಎಂದು ಅಳುಕಿನಿಂದ ಕೇಳಿದಳು ಹರಿಯ ತಾಯಿ.ಆಗ ರಂಗಪ್ಪ” ಛೇ..ಹಾಗೇನಿಲ್ಲ ಇಂಥಾ ಮಗನನ್ನು ಹೆತ್ತವಳು ನೀನು ಪುಣ್ಯವಂತೆ,ಆತ ಕೆಲಸದಲ್ಲಿ ತೋರುವ ಶೃದ್ಧೆ, ಪ್ರಾಮಾಣಿಕತೆ ನನಗೆ ತುಂಬ ಮೆಚ್ಚುಗೆ ಆಗಿವೆ.ಈಗ ಹರಿ ನಿನ್ನ ಮಗ ನಲ್ಲ ನನಗೂ ಮಗ ಕೂಡ, ದಯವಿಟ್ಟು ಇನ್ನು ಮುಂದೆ ನೀವು ನನ್ನ ಮನೆಯ ಔಟ್ ಹೌಸ್ ನಲ್ಲಿ ಖಾಲಿ ಇರುವ ಮನೆಗೆ ಬಂದು ವಾಸ ಮಾಡಿ,
ಬಾಡಿಗೆ ಗಿಡಿಗೇ ಎನೂ ಬೇಡ, ನಿಮ್ಮ ಆಶೀರ್ವಾದ ಇದ್ದರೆ ಸಾಕು ಮತ್ತಿನ್ನೆನೂ ಬೇಡ”ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡ ಹರಿಯ ತಾಯಿಯ ಕಣ್ಣಲ್ಲಿ ದಳದಳನೆ ಆನಂದ ಭಾಷ್ಪ ಗಳು ಉದುರಲಾರಂಭಿಸಿದವು.