ಭೂತ ಓಡಿಸಿದ ಭೈರac
ಭೈರ,ಗೌಳನಹಳ್ಳಿಯ,ಮಾಧ್ಯಮಿಕ ಶಾಲೆಯ, ಆರನೇಯ ತರಗತಿ ಯಲ್ಲಿ ಓದುತ್ತಿದ್ದ.ರಜಾ ದಿನಗಳಲ್ಲಿ ಆತ ತನ್ನ ಊರಿನ ಪಕ್ಕ, ನಗರದಲ್ಲಿರುವ ದೊಡ್ಡಪ್ಪನ ಮನೆಗೆ ಬರುತ್ತಿದ್ದ. ಅವನ ದೊಡ್ಡಪ್ಪ ನಗರದ ಹೆಸರುವಾಸಿ ಕಾಂಟ್ರ್ಯಾಕ್ಟ್ರರ. ಹೊಸ ಬಡಾವಣೆಯಲ್ಲಿ ವಿಶಾಲವಾದ ಮನೆ ಕಟ್ಟಿಸಿದ್ದ.ಭೈರನ ದೊಡ್ಡಪ್ಪನಿಗೆ ಇಬ್ಬರು ಮಕ್ಕಳು.ಮೊದಲನೇಯವ ಪ್ರದೀಪ್,ಎರಡನೇಯವ ಸಂದೀಪ್.ಹಿರಿಯವ
ಏಳನೇ ತರಗತಿಯಲ್ಲಿ ಓದುತ್ತಿದ್ದರೆ ಕಿರಿಯವ ಐದನೇ ತರಗತಿಯಲ್ಲಿ ಓದುತ್ತಿದ್ದ. ಶಾಲೆಯ ರಜಾ ದಿನಗಳಲ್ಲಿ ಮೂವರೂ ಒಟ್ಟಿಗೆ ಸೇರಿ ಮನದಣೀಯುವಂತೆ ಆಟ ಆಡಿ ಸಂತಸದಿಂದ ಸಮಯ ಕಳೆಯುತ್ತಿದ್ದರು.
ಹೀಗೆ ಒಂದು ಮುಸ್ಸಂಜೆ,ಮನೆಯ ದೊಡ್ಡ ಹಜಾರದಲ್ಲಿ ಕುಳಿತು ಮೂವರೂ ಆಡುತ್ತಿದ್ದರು.ಆಗ ಸಂದೀಪ್ ಅದೇನೋ ವಸ್ತು ತರಲೆಂದು ಪಕ್ಕದಲ್ಲಿದ್ದ ತನ್ನ ರೂಮಿಗೆ ಹೋದವ ,ಕ್ಷಣಾರ್ಧದಲ್ಲೇ ಕಿರುಚುತ್ತ ಓಡಿ ಬಂದ.ಆತನ ಮುಖದಲ್ಲಿ ಭಯ ಮತ್ತು ಆತಂಕ ಮೂಡಿತ್ತು. ಹಠಾತ್ತಾಗಿ ಓಡಿ ಬಂದ ತನ್ನ ತಮ್ಮನ
ವರ್ತನೆ ಕಂಡ ಪ್ರದೀಪ್ ಕೂಡ ಹೆದರಿಬಿಟ್ಟ. ಆದರೆ ಭೈರ ಮಾತ್ರ ಕಿಂಚಿತ್ತೂ ಹೆದರದೇ ಸಂದೀಪ್ ನ ಬಳಿ ಬಂದು”ಯಾಕೇ ಏನಾಯ್ತುಯಾಕೆ ಹೆದರಿದ್ದೀ… ಹೇಳು”ಎಂದ. ಆಗ ಸಂದೀಪ್ ಅಳುತ್ತಲೆ “ಮತ್ತೆ,… ನಾನು.. ರೂಮಿಗೆ ಹೋದಾಗ ಕಿಟಕಿ ಆ ಬದಿಯಿಂದ ಭೂತ ಕೈ ಆಡಿಸುತ್ತಿರುವುದನ್ನು ಪರದೆ ಮೇಲೆ ಕಂಡೆ ಅದ್ಕೇ ಭಯಾ ಆಯ್ತು”ಎಂದು ವಿವರಿಸಿದ.ಇದನ್ನು ಪೂರ್ತಿ ಆಲಿಸಿದ ಭೈರ ಮನೆಯಿಂದ ಆಚೆ ಹೋದವ ಕೈಯಲ್ಲೊಂದು ಪರಂಗಿ ಎಲೆ ಇರುವ ಟೊಂಗೆಯೊಂದಿಗೆ ಬಂದು ಅದನ್ನು ಸಂದೀಪ್ ನಿಗೆ ತೋರಿಸುತ್ತಾ “ಇದೇ ನೋಡು ಆ ಭೂತದ ಕೈ, ಅದನ್ನು ಕಟ್ ಮಾಡಿ ತಂದಿರುವೆ”ಎಂದಾಗ ಅಲ್ಲಿಯೇ ಇದ್ದ ಪ್ರದೀಪ್”ಏಯ್ ಹೋಗಲೋ….. ಇದು ಪರಂಗಿ ಗಿಡದ ಎಲೆ ಅಲ್ವಾ? ಮತ್ತೆ ಭೂತಾ ಗೀತಾ ಅಂತ ಬುರುಡೆ ಬಿಡ್ತಿಯಾ..”ಎಂದ.ಆಗ ಭೈರ “ನೋಡು ಪ್ರದೀಪಾ… ನಾನು ಹೇಳ್ತಿರೋದು ಬುರುಡೆನಾ,ನಿಜಾನಾ ಅಂತ ತಿಳಿಬೇಕಿದ್ರೆ.
ನೀವಿಬ್ಬರೂ ಆ ರೂಮಿನ ಕಿಟಕಿ ಪರದೆ ಬಳಿ ಹೋಗಿ, ಗಮನೀಸುತ್ತೀರಿ”ಎಂದವ ತನ್ನ ಕೈಯಲ್ಲಿದ್ದ ಪರಂಗಿ ಗಿಡದ ಎಲೆ ಇರುವ ಟೊಂಗೆ ಯೊಂದಿಗೆ ಮತ್ತೆ ಮನೆಯಿಂದ ಆಚೆಗೆ ಬಂದ.ಕಂಪೌಂಡ ಹಿಂಭಾದಲ್ಲ್ಲಿದ್ದ ಬೀದಿ ದೀಪದ ಬೆಳಕು ನಿಚ್ಚಳವಾಗಿ ಸಂದೀಪನ ರೂಮಿನ ಕಿಟಕಿ ಪರದೆ ಮೇಲೆ ಬೀಳುತ್ತಿತ್ತು.ಭೈರ ತನ್ನ ಕೈಯಲ್ಲಿ ದ್ದ ಪರಂಗಿ ಎಲೆ ಇರುವ ಟೊಂಗೆಯನ್ನು ಕಿಟಕಿ ಪರದೆ ಮೇಲೆ ಬೀಳುತ್ತಿದ್ದ ಬೆಳಕಿಗೆ ಅಡ್ಡ ಹಿಡಿದು ಅಲ್ಲಾಡಿಸ ತೊಡಗಿದ.ಇತ್ತ ಪ್ರದೀಪನೊಂದಿಗೆ ರೂಮಿಗೆ ಬಂದಿದ್ದ ಸಂದೀಪ ಕಿಟಕಿ ಪರದೆ ಮೇಲೆ ಭೂತದ ಕೈಯಂತಿರುವ ನೆರಳು ಕಂಡು ಗಾಬರಿಯಿಂದ ಅಣ್ಣನ ಕೈ ಬಿಗಿ ಯಾಗಿ ಹಿಡಿಯುತ್ತ” ನೋಡು..ಅಣ್ಣಾ..ಅದೇ ಭೂತದ ಕೈ ಆಗಲೂ ಇದೇ ಬಂದಿತ್ತು”ಎಂದು ಹೇಳತೊಡಗಿದಾಗ, ಆಚೆಗೆ ನಿಂತಿದ್ದ ಭೈರ,ಈಗ ಆ ಪರಂಗಿ ಎಲೆ ಇರುವ ಟೊಂಗೆಯನ್ನು ತನ್ನ ಬೆನ್ನಿನ ಹಿಂದೆ ಹಿಡಿದ. ಈಗ ಕಿಟಕಿ ಪರದೆ ಮೇಲೆ ಮೂಡುತ್ತಿದ್ದ ನೆರಳು ಮಾಯ..! ಅದನ್ನು ನೋಡಿದ ಸಂದೀಪ್ ಪುನಃ” ಅಣ್ಣಾ..ಭೂತದ ಕೈ ಎಲ್ಲಿ ಹೋಯ್ತು?”ಎಂದು ಕೇಳುತ್ತಿದ್ದಾಗ
ಅವರಿದ್ದಲ್ಲಿ ಓಡಿ ಬಂದ ಭೈರ” ನೋಡಿಲ್ಲಿ..ಆ ಭೂತದ ಕೈ ಕಟ್ ಮಾಡಿ ತಂದಿರುವೆ”ಎಂದು ಹೇಳುತ್ತ ಎಲ್ಲ ವಿವರಿಸಿದ.ಆಗ ಸಂದೀಪನ ಮನದಲ್ಲಿದ್ದ ಭೂತದ ಭೀತಿ ಮಾಯವಾಯ್ತು.